PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಶೂನ್ಯ ಡೌನ್ ಪೇಮೆಂಟ್‌ನಲ್ಲಿ ನಾನು ಹೋಮ್ ಲೋನ್ ಪಡೆಯಬಹುದೇ?

give your alt text here

ಇಂದು ಅನೇಕ ವಿಭಿನ್ನ ಹೋಮ್ ಲೋನ್ ಆಯ್ಕೆಗಳು ಲಭ್ಯವಿರುವುದರಿಂದ, ಅನೇಕರಿಗೆ ಮನೆ ಖರೀದಿಸುವ ಅಥವಾ ನಿರ್ಮಿಸುವ ಕನಸು ನನಸಾಗುವುದು ಇನ್ನು ಮುಂದೆ ಕಷ್ಟವಲ್ಲ. ಬಡ್ಡಿ ದರಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದು, ಪಿಎನ್‌ಬಿ ಹೌಸಿಂಗ್‌ನಂತಹ ಸಾಲದಾತರು ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತಾರೆ. ಆದಾಗ್ಯೂ, ಹೆಚ್ಚಿನ ಸಾಲದಾತರು ನಿಮ್ಮ ಆಸ್ತಿಯ ಮೌಲ್ಯದ ಗರಿಷ್ಠ 90% ವರೆಗೆ ಸಾಲ ನೀಡುತ್ತಾರೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್/ಎನ್‌ಎಚ್‌ಬಿ ಮಾರ್ಗಸೂಚಿಗಳಿಂದ ಕಡ್ಡಾಯಗೊಳಿಸಲಾಗಿದೆ.

ಹೀಗಾಗಿ, ಉಳಿದ 10% ಅನ್ನು ಡೌನ್ ಪೇಮೆಂಟ್ ಆಗಿ ಒದಗಿಸಬೇಕು. ಆಸ್ತಿಯ ಮೌಲ್ಯವನ್ನು ಅವಲಂಬಿಸಿ, ಈ ಡೌನ್ ಪೇಮೆಂಟ್ ಬದಲಾಗಬಹುದು. ಪರಿಣಾಮವಾಗಿ, ನಿಮ್ಮ ಮನೆಯ ಮೌಲ್ಯವು ಹೆಚ್ಚಾಗಿದ್ದರೆ, ಡೌನ್ ಪೇಮೆಂಟ್ ಕೂಡ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಬ್ಯಾಂಕ್ ಅಕೌಂಟ್‌ನಲ್ಲಿ ಸಾಕಷ್ಟು ಹಣವನ್ನು ಹೊಂದಿಲ್ಲದಿದ್ದರೆ ಕಷ್ಟವಾಗಬಹುದು. ಆಗ ಮೂಡುವ ಪ್ರಶ್ನೆ ಏನೆಂದರೆ,:

ಡೌನ್ ಪೇಮೆಂಟ್ ಇಲ್ಲದೆ ನಾನು ಮನೆ ಖರೀದಿಸಬಹುದೇ?

ಸತ್ಯ ಹೇಳುವುದಾದರೆ, ಉತ್ತರ ಇಲ್ಲ. ಆದಾಗ್ಯೂ, ಡೌನ್ ಪೇಮೆಂಟ್‌ಗೆ ಅಗತ್ಯವಿರುವ ಹಣಕಾಸನ್ನು ಹೆಚ್ಚು ದಕ್ಷವಾಗಿ ಮತ್ತು ತ್ವರಿತವಾಗಿ ವ್ಯವಸ್ಥೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಆಯ್ಕೆಗಳನ್ನು ನೀವು ಕಂಡುಕೊಳ್ಳುತ್ತೀರಿ.

ಓದಲೇಬೇಕಾದವು: ಹೋಮ್‌ಲೋನ್‌ಗೆ ಅಗತ್ಯವಿರುವ ಕನಿಷ್ಠ ಡೌನ್‌ ಪೇಮೆಂಟ್ ಎಷ್ಟು?

ಯಾವುದೇ ಡೌನ್ ಪೇಮೆಂಟ್ ಇಲ್ಲದ ಲೋನ್‌ಗಳು

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಸಾಲದಾತರು ಆಸ್ತಿಯ ಮೌಲ್ಯದ ಪ್ರಕಾರ ನಿರ್ದಿಷ್ಟ ಮೊತ್ತವನ್ನು ಮಾತ್ರ ವಿತರಿಸಬಹುದು:

ಆಸ್ತಿಯ ಮೌಲ್ಯ ಗರಿಷ್ಠ ಲೋನ್ ಮೊತ್ತ
=<30 ಲಕ್ಷ (30 ಲಕ್ಷಕ್ಕಿಂತ ಕಡಿಮೆ) ಆಸ್ತಿ ಮೌಲ್ಯದ ಗರಿಷ್ಠ 90% ವರೆಗೆ ಫಂಡಿಂಗ್
> 30 ಲಕ್ಷ -75 ಲಕ್ಷ ಆಸ್ತಿ ಮೌಲ್ಯದ ಗರಿಷ್ಠ 80% ವರೆಗೆ ಫಂಡಿಂಗ್
> 75 ಲಕ್ಷ ಆಸ್ತಿ ಮೌಲ್ಯದ ಗರಿಷ್ಠ 75% ವರೆಗೆ ಫಂಡಿಂಗ್

ಆಸ್ತಿಯ ಮೌಲ್ಯವನ್ನು ಅವಲಂಬಿಸಿ, ನೀವು ಡೌನ್ ಪೇಮೆಂಟ್ ವ್ಯವಸ್ಥೆ ಮಾಡಬೇಕಾಗುತ್ತದೆ. ಮನೆಯ ಡೌನ್ ಪೇಮೆಂಟ್‌ಗಾಗಿ ಹಣ ಹೊಂದಿಸುವ ಕೆಲವು ಅತ್ಯಂತ ಪ್ರಮುಖ ವಿಧಾನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

1. ನಿಮ್ಮ ಹೂಡಿಕೆಗಳಿಂದ ಹಣ ತೆಗೆದುಕೊಳ್ಳಿ

ನೀವು ಡೈನಮಿಕ್ ಹೂಡಿಕೆ ಪೋರ್ಟ್‌ಫೋಲಿಯೋವನ್ನು ಹೊಂದಿದ್ದರೆ, ಡೌನ್ ಪೇಮೆಂಟ್ ಮಾಡಲು ನೀವು ನಿಮ್ಮ ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಡೆಪಾಸಿಟ್‌ಗಳು ಇತ್ಯಾದಿಗಳನ್ನು ಬಳಸಬಹುದು. ಆದಾಗ್ಯೂ, ಹೆಚ್ಚಿನ ಲಾಭವನ್ನು ನೀಡದಿರುವ ಅಥವಾ ಯಾವುದೇ ತೆರಿಗೆ ಪ್ರಯೋಜನಗಳನ್ನು ನೀಡದಿರುವ ಹೂಡಿಕೆಗಳನ್ನು ಮಾತ್ರ ಬಳಸಲು ಸಲಹೆ ನೀಡಲಾಗುತ್ತದೆ.

2. ಸರಿಯಾದ ಪ್ಲಾನಿಂಗ್ ಮಾಡಿ

ಡೌನ್ ಪೇಮೆಂಟ್ ಮಾಡುವಲ್ಲಿ ಸರಿಯಾದ ಯೋಜನೆಯು ಹೆಚ್ಚು ಪ್ರಯೋಜನಕಾರಿಯಾಗಿರಬಹುದು. ಇದಕ್ಕಾಗಿ, ನಿಮ್ಮ ಮಾಸಿಕ ಆದಾಯದ ನಿಗದಿತ ಶೇಕಡಾವಾರನ್ನು ಮೀಸಲಿಡುವುದು ಮುಖ್ಯವಾಗಿದೆ. ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಡೆಪಾಸಿಟ್‌ಗಳು, ಚಿನ್ನ ಇತ್ಯಾದಿಗಳಲ್ಲಿಯೂ ನೀವು ಹಣವನ್ನು ಹೂಡಿಕೆ ಮಾಡಬಹುದು. ಡೌನ್ ಪೇಮೆಂಟ್‌ನಿಂದ ಉಂಟಾದ ಹಣಕಾಸಿನ ಹೊರೆಯು ನಿಮಗೆ ಭಾರ ಆಗಬಾರದು ಮತ್ತು ಅದನ್ನು ತಪ್ಪಿಸಲು ಸರಿಯಾದ ಪ್ಲಾನಿಂಗ್ ಸಹಾಯ ಮಾಡುತ್ತದೆ.

3. ಕೆಲವು ಆಸ್ತಿಗಳನ್ನು ಲಿಕ್ವಿಡೇಟ್ ಮಾಡಿ

ಈ ವಿಧಾನವು ಡೌನ್ ಪೇಮೆಂಟ್ ಪಾವತಿಸಲು ಸಹಾಯ ಮಾಡಬಹುದು. ನೀವು ತ್ವರಿತವಾಗಿ ಲಿಕ್ವಿಡೇಟ್ ಮಾಡಬಹುದಾದ ಯಾವುದೇ ಆಸ್ತಿಯು ಈ ಕೆಟಗರಿಯಲ್ಲಿ ಬರುತ್ತದೆ. ಇದು ಅಸ್ತಿತ್ವದಲ್ಲಿರುವ ಆಸ್ತಿ, ಸುಲಭವಾಗಿ ಟ್ರೇಡ್ ಮಾಡಬಹುದಾದ ಬಾಂಡ್‌ಗಳು, ಭೌತಿಕವಲ್ಲದ ಸ್ವತ್ತುಗಳು ಇತ್ಯಾದಿಗಳನ್ನು ಒಳಗೊಂಡಿದೆ.

4. ನಿಮ್ಮ ಯೋಜನೆಗೆ ಹಣಕಾಸು ಒದಗಿಸಲು ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ಸಹಾಯ ಪಡೆಯಿರಿ

ಜನರು ಈ ವಿಚಾರವನ್ನು ಪರಿಗಣಿಸುವುದು ಕಡಿಮೆ, ಆದರೆ ನೀವು ಸರಿಯಾಗಿ ಯೋಚಿಸಿದರೆ ಅದು ಕೆಟ್ಟ ಆಲೋಚನೆಯೇನಲ್ಲ. ಅತ್ಯುತ್ತಮ ವಿಷಯವೆಂದರೆ, ನೀವು ಪಡೆಯುವ ಹಣದ ಮೇಲೆ ನೀವು ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ಬೋನಸ್ ಏನೆಂದರೆ, ಪಾವತಿಗಳನ್ನು ಮಾಡುವಲ್ಲಿ ತಡವಾದರೆ ನೀವು ತಡ ಶುಲ್ಕದ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಹೀಗಾಗಿ, ಡೌನ್ ಪೇಮೆಂಟ್ ಇಲ್ಲದೆ ಹೋಮ್ ಲೋನ್ ಪಡೆಯುವುದು ಸಾಧ್ಯವಾಗದಿರಬಹುದು. ಆದರೆ ನಿಮ್ಮ ಪ್ರೀತಿಪಾತ್ರರ ಸಹಾಯದಿಂದ ನೀವು ಡೌನ್ ಪೇಮೆಂಟ್ ಪಾವತಿಸಬಹುದು.

5. ನಿಮ್ಮ ಕಂಪನಿಯಿಂದ ಲೋನ್ ಅಥವಾ ಮುಂಗಡ ತೆಗೆದುಕೊಳ್ಳುವುದು

ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಕಂಪನಿಯಿಂದ ಹಣ ಪಡೆಯುವ ಆಯ್ಕೆಯನ್ನು ಕೆಲವು ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುತ್ತಾರೆ. ಈ ಪಾಲಿಸಿಗಳ ಸಂಪೂರ್ಣ ವಿವರಗಳನ್ನು ಪಡೆಯಲು ನಿಮ್ಮ ಕಂಪನಿಯ ಎಚ್‌ಆರ್ ಇಲಾಖೆಯನ್ನು ನೀವು ಸಂಪರ್ಕಿಸಬೇಕು. ನೀವು ಹೋಮ್ ಲೋನ್ ತೆಗೆದುಕೊಳ್ಳಲು ಯೋಜಿಸುತ್ತಿರುವ ಕೆಲವು ಪುರಾವೆಗಳನ್ನು ನೀವು ಕಂಪನಿಗೆ ನೀಡಬೇಕಾಗಬಹುದು.

ಡೌನ್ ಪೇಮೆಂಟ್‌ಗಾಗಿ ಹಣ ಹೊಂದಿಸುವ ವಿಷಯದಲ್ಲಿ ನಿಮಗೆ ಕೆಲವು ಆಯ್ಕೆಗಳು ಲಭ್ಯವಿದ್ದರೂ, ಕೆಲವು ವಿಷಯಗಳನ್ನು ಪರಿಗಣಿಸಬೇಕಿದೆ.

ಓದಲೇಬೇಕಾದವು: ಸರಿಯಾದ ಹೋಮ್ ಲೋನ್ ಸಾಲದಾತರನ್ನು ಆಯ್ಕೆ ಮಾಡುವುದು ಹೇಗೆ

ಶೂನ್ಯ ಡೌನ್ ಪೇಮೆಂಟ್ ಆಯ್ಕೆಗಳಿಗಾಗಿ ಪರಿಗಣನೆಗಳು

  • ಹೊಸ ಲೋನ್ ಪಡೆಯುವುದು ಕಷ್ಟಕರವಾಗಬಹುದು: ನೀವು ಈಗಾಗಲೇ ಅಡಮಾನವನ್ನು ತೆಗೆದುಕೊಂಡಿದ್ದೀರಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸರಿಯಾಗಿ ಇರಿಸಲು ಸಮಯಕ್ಕೆ ಸರಿಯಾದ ಪಾವತಿಗಳನ್ನು ಮಾಡಬೇಕು. ಶೂನ್ಯ ಡೌನ್ ಪೇಮೆಂಟ್ ಹೋಮ್ ಲೋನ್ ತೆಗೆದುಕೊಳ್ಳುವುದರಿಂದ ನಿಮ್ಮನ್ನು ಹಣಕಾಸಿನ ತೊಂದರೆ ಹೆಚ್ಚಬಹುದು.
  • ಕುಟುಂಬದಿಂದ ಹಣ ಪಡೆಯುವುದು ಅನಪೇಕ್ಷಿತ ಪರಿಣಾಮ ಬೀರಬಹುದು: ನೀವು ನಿಮ್ಮ ಕುಟುಂಬದಿಂದ ಹಣವನ್ನು ಸಾಲ ಪಡೆದರೆ ಬಡ್ಡಿ ದರವನ್ನು ಭರಿಸಬೇಕಾಗಿಲ್ಲ ಎಂಬುದು ನಿಜ. ಆದಾಗ್ಯೂ, ನೀವು ಸಾಲವನ್ನು ಮರುಪಾವತಿಸದಿದ್ದರೆ, ನಿಮ್ಮ ಕುಟುಂಬ ಸಂಬಂಧಗಳು ತೊಂದರೆಗೆ ಒಳಪಡಬಹುದು.
  • ಸುರಕ್ಷಿತ ಲೋನ್‌ಗಳು ನಿಮ್ಮ ಸ್ವತ್ತುಗಳಿಗೆ ಹಾನಿ ಮಾಡಬಹುದು: ನೀವು ಭದ್ರತೆ ಮೇಲೆ ಲೋನ್ ತೆಗೆದುಕೊಳ್ಳುವಾಗ, ನೀವು ಸ್ವತ್ತುಗಳನ್ನು ಅಪಾಯಕ್ಕೆ ದೂಡುತ್ತೀರಿ. ನೀವು ಈ ಲೋನ್‌ಗಳಲ್ಲಿ ಒಂದಕ್ಕೆ ಅಪ್ಲೈ ಮಾಡುವ ಮೊದಲು, ಮತ್ತೊಮ್ಮೆ ಯೋಚಿಸಿ.

ಕೊನೆಯ ಮಾತು

ಮೇಲೆ ತಿಳಿಸಲಾದ ಅಪಾಯಗಳನ್ನು ತಪ್ಪಿಸಲು, ಲೋನ್‌ನ ಭಾಗವಾಗಿ ಚಿಂತಿಸಲು ಡೌನ್ ಪೇಮೆಂಟ್ ಇಲ್ಲದೆ ಮನೆ ಖರೀದಿಸುವ ಮೊದಲು ಮುಂಚಿತವಾಗಿ ಯೋಜಿಸಲು ಸಲಹೆ ನೀಡಲಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ಅಕೌಂಟ್‌ನಲ್ಲಿ ಸಾಕಷ್ಟು ಹಣವನ್ನು ಹೊಂದುವುದು ಉತ್ತಮ. ಆಗ ನೀವು ನಿಮ್ಮ ಉಳಿದ ಲೋನ್ ಪಾವತಿಸಲು ಇತರ ಲೋನ್ ಪರ್ಯಾಯಗಳ ಮೊರೆ ಹೋಗಬೇಕಾಗಿಲ್ಲ. ಪರಿಣಾಮವಾಗಿ, ನಿಮ್ಮ ಹೊರೆ ಕಡಿಮೆಯಾಗುತ್ತದೆ ಮತ್ತು ಡೌನ್ ಪೇಮೆಂಟ್ ಬಗ್ಗೆ ಚಿಂತಿಸದೆ ನಿಮ್ಮ ಸೂಕ್ತ ಮನೆಯನ್ನು ಖರೀದಿಸಲು ನಿಮಗೆ ಸಾಧ್ಯವಾಗುತ್ತದೆ.

ಇನ್ನಷ್ಟು ತಿಳಿಯಲು ಪಿಎನ್‌ಬಿ ಹೌಸಿಂಗ್‌ನ ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ.

ಎಫ್ಎಕ್ಯೂ

ಡೌನ್ ಪೇಮೆಂಟ್ ಮಾಡದೆ ನಾನು ಹೋಮ್ ಲೋನ್ ಪಡೆಯಬಹುದೇ?

ಆರ್‌ಬಿಐ ನಿಯಮಗಳ ಅಡಿಯಲ್ಲಿ ಶೂನ್ಯ ಡೌನ್ ಪೇಮೆಂಟ್ ಹೋಮ್ ಲೋನ್ ಅಥವಾ ಡೌನ್ ಪೇಮೆಂಟ್ ಇಲ್ಲದೆ ಹೋಮ್ ಲೋನ್ ಸಾಧ್ಯವಿಲ್ಲ. ಸಾಲದಾತರು ನಿಮ್ಮ ಆಸ್ತಿ ಮೌಲ್ಯದ 75%-90% ಮಾತ್ರ ಹಣಕಾಸು ಒದಗಿಸಬಹುದು. ನೀವು ಡೌನ್ ಪೇಮೆಂಟ್ ಇಲ್ಲದೆ ಮನೆ ಖರೀದಿಸಲು ಬಯಸಿದರೆ ಉಳಿತಾಯ, ಹೂಡಿಕೆಗಳು, ಯೋಜನೆ ಅಥವಾ ಕುಟುಂಬ ಬೆಂಬಲದ ಮೂಲಕ ಉಳಿದ ಮೊತ್ತವನ್ನು ನೀವು ವ್ಯವಸ್ಥೆ ಮಾಡಬೇಕು.

ಹೋಮ್ ಲೋನ್‌ಗೆ ಕನಿಷ್ಠ ಡೌನ್ ಪೇಮೆಂಟ್ ಎಷ್ಟು?

ಹೋಮ್ ಲೋನ್‌ಗೆ ಕನಿಷ್ಠ ಡೌನ್ ಪೇಮೆಂಟ್ ಸಾಮಾನ್ಯವಾಗಿ ₹30 ಲಕ್ಷದವರೆಗಿನ ಮನೆಗಳಿಗೆ ಆಸ್ತಿ ಮೌಲ್ಯದ 10% ಆಗಿದೆ. ಹೆಚ್ಚಿನ ಮೌಲ್ಯದ ಆಸ್ತಿಗಳಿಗೆ, ನೀವು 20-25% ಪಾವತಿಸಬೇಕು. ಸಾಲದಾತರು ವೆಚ್ಚದ ಒಂದು ಭಾಗಕ್ಕೆ ಮಾತ್ರ ಹಣಕಾಸು ಒದಗಿಸುತ್ತಾರೆ, ಆದ್ದರಿಂದ ಲೋನಿಗೆ ಅಪ್ಲೈ ಮಾಡುವ ಮೊದಲು ಈ ಮೊತ್ತವನ್ನು ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ.

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

ಕಾಲ್ ಬ್ಯಾಕ್ ಮಾಡಿ