ಅನೇಕ ವರ್ಷಗಳವರೆಗೆ ಬಾಡಿಗೆ ಮನೆಯಲ್ಲಿ ವಾಸಿಸುವವರು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಾರೆ. ಮನೆ ಖರೀದಿಯ ಯೋಜನೆಯನ್ನು ಮುಂದೂಡಿದರೆ, ದೇಶದಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳು ಹೋಮ್ ಲೋನ್ ಪಡೆಯುವುದನ್ನು ಕಷ್ಟವಾಗಿಸಬಹುದು. ಆದ್ದರಿಂದ, ಯುವಕರಾಗಿದ್ದಾಗಲೇ ಹೋಮ್ ಲೋನ್ ಪಡೆಯುವುದು ಮತ್ತು ಮನೆ ಖರೀದಿಸುವುದು ಉತ್ತಮ. ಆರಂಭಿಕ ಖರೀದಿದಾರರಿಗೆ ಮತ್ತು ತಡವಾಗಿ ಖರೀದಿಸುವವರಿಗೆ ಹೋಮ್ ಲೋನ್ ಕೊಡುಗೆಯನ್ನು ಪ್ರತ್ಯೇಕಿಸಲು ಸಾಕಷ್ಟು ಕಾರಣಗಳಿವೆ.
1. ಸಾಲದಾತರು ಕಡಿಮೆ ಇಎಂಐಗೆ ಕಾರಣವಾಗುವ ಹೆಚ್ಚಿನ ಕಾಲಾವಧಿಯನ್ನು ನೀಡುತ್ತಾರೆ
ಹೋಮ್ ಲೋನ್ ಅವಧಿಯನ್ನು ಅರ್ಜಿದಾರರ ನಿವೃತ್ತಿ ವಯಸ್ಸಿನಿಂದ ಹಿಂದಕ್ಕೆ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ನಿವೃತ್ತಿ ವಯಸ್ಸು 60 ವರ್ಷಗಳಾಗಿರುವುದರಿಂದ 40 ವರ್ಷದ ಅರ್ಜಿದಾರರು ಗರಿಷ್ಠ 20 ವರ್ಷಗಳ ಕಾಲಾವಧಿಯನ್ನು ಪಡೆಯುತ್ತಾರೆ. ಕೆಲವು ಸಾಲದಾತರು 70 ವರ್ಷಗಳವರೆಗೆ ಹೋಮ್ ಲೋನ್ ಆಫರ್‌ಗಳನ್ನು ವಿಸ್ತರಿಸುತ್ತಾರೆ. ಆದರೆ, 30 ರ ಆರಂಭಿಕ ಅಥವಾ 20 ರ ವಯಸ್ಸಿನ ಕೊನೆಯಲ್ಲಿದ್ದಾಗ ಹೋಮ್ ಲೋನ್ ಪಡೆಯುವುದು ಯಾವಾಗಲೂ ಉತ್ತಮ. ಇದರಿಂದಾಗಿ ದೀರ್ಘ ವರ್ಷಗಳ ಕಾಲಾವಧಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ. ಹೆಚ್ಚಿನ ಕಾಲಾವಧಿ ಎಂದರೆ, ಮಾಸಿಕ ನಗದು ಹೊರ ಹರಿವನ್ನು ತಗ್ಗಿಸುವ ಕಡಿಮೆ ಇಎಂಐ ಎಂದರ್ಥ.
2. ಹಣಕಾಸು ಸಂಸ್ಥೆಗಳು ಯುವ ಅರ್ಜಿದಾರರನ್ನು 'ಕಡಿಮೆ ಅಪಾಯ' ಎಂದು ಪರಿಗಣಿಸುತ್ತವೆ’
ತಮ್ಮ 20 ರಲ್ಲಿ ಮತ್ತು 30 ರ ಆರಂಭಿಕ ವಯಸ್ಸಿನಲ್ಲಿರುವ, ತುಲನಾತ್ಮಕವಾಗಿ ಉತ್ತಮ ಆರೋಗ್ಯ, ಸ್ಥಿರ ಆದಾಯ ಮತ್ತು ದೀರ್ಘಾವಧಿ ಔದ್ಯೋಗಿಕ ಜೀವನ ಹೊಂದಿರುವ ಹೋಮ್ ಲೋನ್ ಅರ್ಜಿದಾರರನ್ನು ಕಡಿಮೆ ಅಪಾಯದ ಅರ್ಜಿದಾರರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ವೃತ್ತಿಪರ ಜೀವನದ ಆರಂಭಿಕ ಹಂತಗಳಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ಉತ್ತಮ.
ಓದಲೇಬೇಕಾದವು: 45 ರ ನಂತರ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಸಲಹೆಗಳು
3. ಸಣ್ಣ ವಯಸ್ಸಿನ ವ್ಯಕ್ತಿಗಳು ನಿರ್ಮಾಣದಲ್ಲಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ
ಅವಿವಾಹಿತರು, ಇತ್ತೀಚೆಗೆ ಮದುವೆಯಾದವರು ಅಥವಾ ಆರಂಭಿಕ ವೃತ್ತಿಪರರು ಪ್ರಾಜೆಕ್ಟ್ ಪೂರ್ಣಗೊಳ್ಳುವವರೆಗೆ ಕೆಲವು ವರ್ಷಗಳವರೆಗೆ ಕಾಯಲು ಸಾಧ್ಯವಾಗುತ್ತದೆ. ಪ್ರಾಜೆಕ್ಟ್ ನಡೆಯುತ್ತಿರುವ ಸಮಯದಲ್ಲಿ, ಅವರು ನಿಯತಕಾಲಿಕವಾಗಿ ಆಸ್ತಿಗೆ ಪಾವತಿಸಬಹುದು ಮತ್ತು ನಿರ್ಮಾಣದ ಪ್ರತಿ ಹಂತ ಮುಗಿದಾಗಲೂ ಸಣ್ಣ ಕಂತಿನ ಹೊರೆಯನ್ನು ಹೊಂದಬಹುದು.
4. ಕಡಿಮೆ ವಯಸ್ಸಿನ ಜನರು ಕಡಿಮೆ ಹಣಕಾಸಿನ ಜವಾಬ್ದಾರಿಗಳನ್ನು ಹೊಂದಿರುತ್ತಾರೆ
ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬೆಳೆದಾಗ ಹೆಚ್ಚುತ್ತಿರುವ ಕುಟುಂಬದ ಜವಾಬ್ದಾರಿಗಳು ಮತ್ತು ಹೆಚ್ಚಿನ ಜೀವನ ವೆಚ್ಚಗಳು ಸ್ವಂತ ಮನೆಯ ಮೇಲೆ ಪರಿಣಾಮವನ್ನು ಬೀರಬಹುದು. ಆರಂಭಿಕ ವರ್ಷಗಳಲ್ಲಿ ಅಥವಾ ಗಳಿಸಲು ಆರಂಭಿಸಿದಂತೆ ಜನರು ಸ್ವಂತ ಮನೆಯಲ್ಲಿ ಹೂಡಿಕೆ ಮಾಡಬೇಕು. ಅಂದರೆ, ಜೀವನದ ಪ್ರಮುಖ ಜವಾಬ್ದಾರಿ ಮುಗಿಯುವುದರಿಂದ ಮುಂದಿನ ದಿನಗಳಲ್ಲಿ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಇದು ತುಲನಾತ್ಮಕವಾಗಿ ಬಹಳ ಮೊದಲೇ ಲೋನ್ ಮುಚ್ಚುವಿಕೆಯನ್ನು ಸಕ್ರಿಯಗೊಳಿಸುತ್ತದೆ.

.png/b7573452-5e04-fa5d-c658-c66c41c8045a?version=1.0&t=1778788926550)









