PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ನಿಮ್ಮ ಹೋಮ್ ಲೋನ್ ಮುಚ್ಚುವಾಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಷಯಗಳು

give your alt text here

ನಿಮ್ಮ ಹೋಮ್ ಲೋನ್‌ನ ಅಂತಿಮ ಬಾಕಿಗಳನ್ನು ಪಾವತಿಸಿದ ನಂತರ, ನೀವು ಮನೆಯ ಹೆಮ್ಮೆಯ ಮಾಲೀಕರಾಗುತ್ತೀರಿ. ಇದು ಆಕರ್ಷಕ ಮತ್ತು ಭಾವನಾತ್ಮಕ ಕ್ಷಣವಾಗಿದೆ ಮತ್ತು ಆಚರಣೆಯ ಸಮಯವಾಗಿದೆ. ಆದರೆ, ನೀವು ಆಚರಣೆ ಮಾಡಲು ಮುಂದಾಗುವ ಮೊದಲು, ಹೋಮ್ ಲೋನ್ ಮುಚ್ಚುವ ಪ್ರಕ್ರಿಯೆಯಲ್ಲಿ ಕೆಲವು ಕೆಲಸಗಳನ್ನು ಮುಗಿಸಬೇಕು. ಈ ಕೆಲಸಗಳಿಲ್ಲದೆ ಹೋಮ್ ಲೋನ್ ಮುಚ್ಚುವ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ ಹಾಗೂ ಭವಿಷ್ಯದಲ್ಲಿ ತೊಂದರೆಗಳಿಗೆ ಕಾರಣವಾಗುತ್ತದೆ.

ಹೋಮ್ ಲೋನ್ ಮುಚ್ಚುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:

  • ನಿಮ್ಮ ಸಾಲದಾತರಿಂದ ನಿಮ್ಮ ಎಲ್ಲಾ ಮೂಲ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ
  • ನಿಮ್ಮ ಸಾಲದಾತರ ಬಳಿ 'ನೋ ಡ್ಯೂಸ್' ಸರ್ಟಿಫಿಕೇಟ್‌ ಕೇಳಿ
  • 'ಆಸ್ತಿ ಮೇಲಿನ ಲೀನ್' ತೆಗೆದುಹಾಕಿ
  • ಅಪ್ಡೇಟ್ ಆದ 'ನಾನ್ ಎನ್ಕಂಬರೆನ್ಸ್ ಸರ್ಟಿಫಿಕೇಟ್' ಪಡೆಯಿರಿ’
  • ನಿಮ್ಮ 'ಕ್ರೆಡಿಟ್ ರೆಕಾರ್ಡ್‌ಗಳು' ಅಪ್ಡೇಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಈ ಕೆಳಗೆ, ಮೇಲೆ ಒದಗಿಸಲಾದ ಪಟ್ಟಿಯಿಂದ ನಾವು ಪಾಯಿಂಟ್‌ಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ

ನಿಮ್ಮ ಹೋಮ್ ಲೋನ್ ಒದಗಿಸುವವರಿಗೆ ನೀವು ಸಲ್ಲಿಸಿದ ಎಲ್ಲಾ ಮೂಲ ಹೋಮ್ ಲೋನ್ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಮಾಡಿ. ನಿಮ್ಮ ಲೋನ್ ಅನ್ನು ಪಾವತಿಸಿದ ನಂತರ, ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ ಮತ್ತು ನಿಮ್ಮ ಪಟ್ಟಿಯೊಂದಿಗೆ ಅವುಗಳನ್ನು ಹೋಲಿಸಿ. ಇವುಗಳು ಪ್ರಮುಖ ಡಾಕ್ಯುಮೆಂಟ್‌ಗಳಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ.

ಭಾರತದಲ್ಲಿ ಹೋಮ್ ಲೋನ್‌ಗೆ ಸಲ್ಲಿಸಿದ ಡಾಕ್ಯುಮೆಂಟ್‌ಗಳ ಪಟ್ಟಿಯು ಇವುಗಳನ್ನು ಒಳಗೊಂಡಿದೆ:

  • ಮಾರಾಟ ಪತ್ರ
  • ಟೈಟಲ್ ಡೀಡ್
  • ಲೋನ್ ಅಗ್ರೀಮೆಂಟ್
  • ಪವರ್ ಆಫ್ ಅಟಾರ್ನಿ
  • ಸಲ್ಲಿಸಿದ ಭದ್ರತಾ ಚೆಕ್‌ಗಳನ್ನು ಸಂಗ್ರಹಿಸಿ

ಈ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುವಾಗ, ಅವುಗಳ ಸ್ಥಿತಿಯನ್ನು ಮೌಲ್ಯಮಾಪನ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಅನೇಕ ಪುಟಗಳನ್ನು ಹೊಂದಿರುವ ಒಪ್ಪಂದಗಳನ್ನು, ತಪ್ಪಿಹೋದ ಅಥವಾ ಹಾನಿಗೊಳಗಾದ ಪುಟಗಳಿಗಾಗಿ ಸಂಪೂರ್ಣವಾಗಿ ಪರಿಶೀಲಿಸಬೇಕು.

ನೋ ಡ್ಯೂಸ್ ಸರ್ಟಿಫಿಕೇಟ್ ಪಡೆಯಿರಿ (ಎನ್‍ಡಿಸಿ)

ಎನ್‌ಡಿಸಿ ಎಂದೂ ಕರೆಯಲ್ಪಡುವ ನೋ ಡ್ಯೂಸ್ ಸರ್ಟಿಫಿಕೇಟ್, ನೀವು ನಿಮ್ಮ ಹೋಮ್ ಲೋನ್ ಅನ್ನು ಪಾವತಿಸಿದ್ದೀರಿ ಮತ್ತು ಸಾಲದಾತರು ಆಸ್ತಿಯ ಮೇಲೆ ಯಾವುದೇ ಹಕ್ಕುಗಳನ್ನು ಹೊಂದಿಲ್ಲ ಎಂದು ಹೇಳುತ್ತದೆ. ಹೋಮ್ ಲೋನ್ ಮುಚ್ಚುವ ಪ್ರಕ್ರಿಯೆಯ ಅತ್ಯಂತ ಪ್ರಮುಖ ಡಾಕ್ಯುಮೆಂಟ್‌ಗಳಲ್ಲಿ ಎನ್‌ಡಿಸಿ ಒಂದಾಗಿದೆ ಮತ್ತು ಅದನ್ನು ನಿಮ್ಮ ಸಾಲದಾತರಿಂದ ಸಂಗ್ರಹಿಸಬೇಕು.

ಎನ್‌ಡಿಸಿ ಈ ಕೆಳಗಿನ ನಿರ್ಣಾಯಕ ವಿವರಗಳನ್ನು ನಮೂದಿಸುತ್ತದೆ:

  • ಆಸ್ತಿ ವಿಳಾಸ
  • ಗ್ರಾಹಕರ ಹೆಸರು
  • ಲೋನ್ ಅಕೌಂಟ್ ನಂಬರ್
  • ಲೋನ್ ಮೊತ್ತ
  • ಲೋನ್ ಆರಂಭ ಮತ್ತು ಮುಕ್ತಾಯದ ದಿನಾಂಕ

ನೀವು ನಿಮ್ಮ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸಿದರೆ ನೋ ಡ್ಯೂಸ್ ಸರ್ಟಿಫಿಕೇಟ್ (ಎನ್‌ಡಿಸಿ) ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಸ್ತಿಯ ಮೇಲಿನ ಹಕ್ಕನ್ನು ತೆಗೆದುಹಾಕಿ

ನೀವು ಸಂಪೂರ್ಣವಾಗಿ ಲೋನ್ ಪಾವತಿ ಮಾಡುವವರೆಗೆ ಸಾಲದಾತರಿಗೆ ನಿಮ್ಮ ಆಸ್ತಿಯ ಮೇಲೆ ಹಕ್ಕುಗಳನ್ನು ಹೊಂದಲು ಲೀನ್ ಅನುಮತಿ ನೀಡುತ್ತದೆ ಹಾಗೂ ಆಸ್ತಿಯನ್ನು ಮಾರಾಟ ಮಾಡದಂತೆ ನಿಮ್ಮನ್ನು ತಡೆಯುತ್ತದೆ. ಆದ್ದರಿಂದ, ಹೋಮ್ ಲೋನ್ ಮುಚ್ಚುವ ಪ್ರಕ್ರಿಯೆಯ ಅಗತ್ಯ ಭಾಗವೆಂದರೆ ಲೀನ್ (ಹಕ್ಕನ್ನು) ತೆಗೆದು ಹಾಕುವುದಾಗಿದೆ. ಇದನ್ನು ಮಾಡಲು ನೀವು ನೋಂದಣಿದಾರರ ಕಚೇರಿಗೆ ಭೇಟಿ ನೀಡಬೇಕು.

ಸಾಲದಾತರು ಹಕ್ಕುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿದರೆ, ನೀವು ಬ್ಯಾಂಕ್ ನೀಡಿದ ಎನ್‌ಒಸಿ ಸಹಾಯದಿಂದ ಅದನ್ನು ತೆಗೆದುಹಾಕಬಹುದು.

ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಿದೆಯೇ ಎಂದು ಪರಿಶೀಲಿಸಿ

ನೀವು ಲೋನ್‌ಗೆ ಅಪ್ಲೈ ಮಾಡುವಾಗ ಉತ್ತಮ ಕ್ರೆಡಿಟ್ ಸ್ಕೋರ್ ತುಂಬಾ ಮುಖ್ಯವಾಗುತ್ತದೆ. ನೀವು ನಿಮ್ಮ ಪ್ರಸ್ತುತ ಹೋಮ್ ಲೋನ್ ಪಾವತಿಸಿದ ನಂತರ, ನಿಮ್ಮ ಹಣಕಾಸು ಸಂಸ್ಥೆಯು ಈ ಮಾಹಿತಿಯನ್ನು ಸಿಬಿಲ್‌ನಲ್ಲಿ ಅಪ್ಡೇಟ್ ಮಾಡುತ್ತದೆ. ಈ ಮಾಹಿತಿಯನ್ನು ಅಪ್ಡೇಟ್ ಮಾಡದಿದ್ದರೆ, ನೀವು ಇನ್ನೊಂದು ಲೋನ್‌ಗೆ ಅಪ್ಲೈ ಮಾಡುವಾಗ ಅಥವಾ ಭವಿಷ್ಯದ ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ ನೀವು ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ, ನಿಮ್ಮ ಅಪ್ಡೇಟ್ ಆದ ಕ್ರೆಡಿಟ್ ಸ್ಕೋರ್‌ಗಾಗಿ (ನಿಮ್ಮ ಕ್ರೆಡಿಟ್ ಹಿಸ್ಟರಿಯಲ್ಲಿ ಅಪ್ಡೇಟ್ ಕಾಣಿಸಿಕೊಳ್ಳಲು ಒಂದು ತಿಂಗಳು ಹಿಡಿಯಬಹುದು) ನೀವು ಪರಿಶೀಲಿಸುವುದು ಮುಖ್ಯವಾಗಿದೆ.

ನೆನಪಿಡಿ, ನಿಮ್ಮ ಎಲ್ಲಾ ಇಎಂಐಗಳನ್ನು ಮರುಪಾವತಿಸುವುದು ನಿಮ್ಮ ಹೋಮ್ ಲೋನ್ ಮುಚ್ಚುವ ಪ್ರಕ್ರಿಯೆಯನ್ನು ಕೊನೆಗೊಳಿಸುವುದಿಲ್ಲ. ಮೇಲೆ ನಮೂದಿಸಿದ ಎಲ್ಲವನ್ನೂ ನೀವು ಪರಿಶೀಲಿಸಬೇಕು ಮತ್ತು ಅಗತ್ಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ, ನಮ್ಮನ್ನು ಇಲ್ಲಿ ಸಂಪರ್ಕಿಸಿ: 1800 120 8800

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

ಕಾಲ್ ಬ್ಯಾಕ್ ಮಾಡಿ